ಮಹಾಸ್ರಗ್ಧರಾ ವೃತ್ತದ ಪ್ರತಿಪಾದದಲ್ಲಿಯೂ ೨೨ ಅಕ್ಷರಗಳಿವೆ. ಇದರ ಗಣವಿನ್ಯಾಸದಲ್ಲಿ ಬರುವ ಗಣಗಳು "ಸತತನಸರರಗು" (ಗು-ಗುರು) ಇದರ ಸೂತ್ರಪದ್ಯ ಹೀಗಿದೆ "ಸತತಂನಂಸಂರರಂಗಂ ನೆರೆದೆಸೆಯೆ ಮಹಾ ಸ್ರಗ್ಧರಾ ವೃತ್ತಮಕ್ಕುಂ" ಇದರ ಪ್ರಸ್ತಾರ ವಿನ್ಯಾಸ ಹೀಗಿದೆ UU_| __U| _ _ | | _| _U_| _U_| _ ಸತತಂ|ನಂಸಂರ|ರಂಗಂ ನೆ|ರೆದೆಸೆ|ಯೆ ಮಹಾ| ಸ್ರಗ್ಧರಾ |ವೃತ್ತಮ|ಕ್ಕುಂ ಸಂಸ್ಕೃತ-ಕನ್ನಡಗಳೆರಡರಲ್ಲಿಯೂ ಈ ಛಂದಸ್ಸಿನ ಪದ್ಯಗಳು ವಿಫುಲವಾಗಿ ಸಿಗುತ್ತವೆ. ಇದು ಸ್ರಗ್ಧರೆಯ ಮೊದಲ ಗುರುವನ್ನು ಲಘುಗಳೆರಡರಿಂದ ಬದಲಾಯಿಸಿದಾಗ ಸಿಗುತ್ತದೆ ಉದಾಹರಣೆ:- ಇದು ಲಾಕ್ಷಾಗೇಹದಾಹಕ್ಕಿದುವಿಷಮವಿಷಾನ್ನಕ್ಕಿದಾನಾಡಜೂದಿಂ- ಗಿದು ಪಾಂಚಾಲೀ ಪ್ರಪಂಚಕ್ಕಿದು ಕೃತಕ ಸಭಾಲೋಚನಭ್ರಾಂತಿಗೆಂದೋ- ವದೆ ಪೊಯ್ದಂ ಕಾಲ್ಗಳಂ ತೋಳ್ಗಳನಗಲುರಮಂ ಕೆನ್ನೆಯಂ ನೆತ್ತಿಯಂ ಕೋ- ಪದಿನಯ್ದುಂ ದುರ್ನಯಕ್ಕಯ್ದೆಡೆಯನುರುಗದಾದಂಡದಿಂ ಭೀಮಸೇನಂ|| (ರನ್ನನ ಗದಾಯುದ್ಧ ೮-೧೩) == ನೋಡಿ == ಛಂದಸ್ಸು == ಉಲ್ಲೇಖ == ರನ್ನನ ಗದಾಯುದ್ಧ